ಸೌತ್‌ವೆಸ್ಟ್ ಏರ್‌ಲೈನ್ಸ್ ಅಮೇರಿಕಾದ ಪ್ರಮುಖ ವಿಮಾನಯಾನ ಸಂಸ್ಥೆ. ಪ್ರಧಾನ ಕಚೇರಿ ಡಲ್ಲಾಸ್‌ನ ಟೆಕ್ಸಾಸ್ ನಲ್ಲಿದ್ದು ಅತ್ಯಂತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಎಂದು ಹೆಸರುಮಾಡಿದೆ. ೧೯೬೭ ರಲ್ಲಿ ಹೆರ್ಬ್ ಕೆಲ್ಲೆಹೆರ್ ಎರ್ ಸೌತ್ವೆಸ್ಟ್ ಎಂಬ ಹೆಸರಿನಲ್ಲಿ ಈ ವಿಮಾನಯಾನ ಸ೦ಸ್ಥೆಯನ್ನು ಸ್ಥಾಪಿಸಿದರು ನಂತರ ಸೌತ್ವೆಸ್ಟ್ ಏರ್ಲೈನ್ಸ್ ಎಂದು ಬದಲಿಸಲಾಯಿತು. ಈ ಸ೦ಸ್ಥೆಯಲ್ಲಿ ೫೫೦೦೦ಕ್ಕೂ ಹೆಚ್ಚಿನ ನೌಕರರಿದ್ದು, ಪ್ರತಿದಿನ ೪೦೦೦ಕ್ಕೂ ಹೆಚ್ಚು ವಿಮಾನ ಹಾರಾಟವನ್ನು ನಡೆಸುತ್ತದೆ. === ಪ್ರಧಾನ ಕಚೇರಿ === ಪ್ರಧಾನ ಕಚೇರಿ ಡಲ್ಲಾಸ್ ನ ಟೆಕ್ಸಾಸ್ ನಲ್ಲಿದೆ. === ಉದ್ಯೋಗ === ಸೆಪ್ಟೆಂಬರ್ 30, 2017 ರ ವೇಳೆಗೆ,ಸೌತ್ವೆಸ್ಟ್ ಏರ್ಲೈನ್ಸ್ ಸಂಸ್ಥೆಯು 56,000 ಉದ್ಯೋಗಿಗಳನ್ನು ಹೊಂದಿದೆ. ಗ್ಯಾರಿ ಸಿ. ಕೆಲ್ಲಿ ಇದರ ಅಧ್ಯಕ್ಷರು ಮತ್ತು ಸಿಇಒ . == ಉಲ್ಲೇಖಗಳು ==